3 Recipes Using Methi Leaves(ಮೆಂತ್ಯ ಸೊಪ್ಪಿನಿಂದ 3 ಬಗೆಯ ಅಡುಗೆಗಳು)

Methi leaves are nutritious and helps in reducing bad cholestrol, helps in reducing digestion problems etc..

In my home we make Methi Paratha,  Methi leaves pulav, Methi dal etc..

ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು, ಜೀರ್ಣಕಾರಿ.. ಇದರಿಂದ ನಾವು ಪರೋಟ, ಪಲಾವ್, ತೊವ್ವೆ ಮಾಡುತ್ತೇವೆ…

(1) Methi Leaves Paratha /Methi Thepla Recipe (ಮೆಂತ್ಯ ಪರೋಟ ಮಾಡುವ ವಿಧಾನ)

IMG_20200218_085914

Method of making parathas

Take two small bunches of methi leaves, wash and clean it.. chop it and put into a bowl.. Now add half spoon each of jeera, saunf, chopped two green chillies, half spoon each of red chilli and dhaniya powder, 1/4th spoon turmeric powder… add salt and mix well.. To this add a cup of wheat flour, 3 spoons of oil, water.. Mix well to a not so sticky chapati dough…

Rest for 10 minutes, take some amount of dough, roll over, make chapathis and roast on both sides on a hot tawa…

Serve with chutneys or gojju or pickle/curd… Here I have served with haagalakayi gojju..

ಪರೋಟ ಮಾಡುವ ವಿಧಾನ ಹೀಗಿದೆ

ಮೊದಲಿಗೆ ಎರಡು ಕಟ್ಟು ಮೆಂತ್ಯಸೊಪ್ಪನ್ನು ತೊಳೆದು, ಚಿಕ್ಕದಾಗಿ ಹೆಚ್ಚಿ… ಇದನ್ನು ಒಂದು ಪಾತ್ರೆಗೆ ತೆಗೆದುಕೊಂಡು, ಅದಕ್ಕೆ ಅರ್ಧ ಚಮಚ ಸೋಂಪು ಕಾಳು, ಜೀರಿಗೆ ಹಾಕಿ… ನಂತರ ತಲಾ ಅರ್ಧ ಚಮಚ ಅಚ್ಚ ಖಾರದ ಪುಡಿ, ಧನಿಯ ಪುಡಿ ಹಾಕಿ, ಚಿಟಿಕೆ ಅರಿಶಿನ, ಉಪ್ಪು, ಮೂರು ಚಮಚ ಹಸಿ ಎಣ್ಣೆ ಹಾಕಿ, ಕಲಸಿ, ಸ್ವಲ್ಪ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ… ಕೆಳಗಿನ ಚಿತ್ರ ಕಲಸಿಕೊಂಡು ಇಟ್ಟಿದ್ದ ಹಿಟ್ಟಿನದು…

IMG_20200218_090000

ಕಾಲು ಘಂಟೆಯ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಲಟ್ಟಿಸಿ, ಕಾದ ಕಾವಲಿಯ ಮೇಲೆ ಎರಡೂ ಬದಿ ಬೇಯಿಸಿ… ಈಗ ಆರೋಗ್ಯಕರ ಮೆಂತ್ಯ ಸೊಪ್ಪಿನ ಪರೋಟ ತಯಾರಾಗುತ್ತದೆ….

ಇದನ್ನು ಮೊಸರು ಉಪ್ಪಿನಕಾಯಿ, ಚಟ್ನಿ ಅಥವಾ ಗೊಜ್ಜಿನೊಂದಿಗೆ ಬಡಿಸಿ.. ನಾನು ಇಲ್ಲಿ ಹಾಗಲಕಾಯಿ ಗೊಜ್ಜಿನೊಂದಿಗೆ ಬಡಿಸಿದ್ದೇನೆ..

hagalkayigojju

2) Methi Pulao/Rice Recipe

ಮೆಂತ್ಯ ಪಲಾವ್ ಮಾಡುವ ವಿಧಾನ ನಾನು ಹಿಂದೆಯೇ ಪೋಸ್ಟ್ ಮಾಡಿದ್ದೇನೆ… ವಿಧಾನ ನೋಡಲು ಇಲ್ಲಿ ಕ್ಲಿಕ್ ಮಾಡಿ…

IMG_20191102_172528

3) Methi Dal Recipe/ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವ ವಿಧಾನ

IMG_20200408_140725

ಮೊದಲು ಅರ್ಧ ಬಟ್ಟಲು ಹೆಸರುಬೇಳೆಯನ್ನು ತೊಳೆದು ಒಂದು ಹೆಚ್ಚಿದ ಟೊಮೆಟೊ ಜೊತೆಗೆ ಎರಡು ಸೀಳಿದ ಹಸಿಮೆಣಸಿನಕಾಯಿ ಹಾಕಿ , ಚಿಟಿಕೆ ಅರಿಶಿನ, ಎಣ್ಣೆ ಜೊತೆಗೆ ಬೇಯಿಸಿಕೊಳ್ಳಿ…

ನಂತರ ಒಂದು ಬಾಣಲೆಗೆ, ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ ಸಿಡಿಸಿ, ಅರ್ಧರ್ಧ ಚಮಚ ಕಡಲೆಬೇಳೆ, ಉದ್ದಿನಬೇಳೆ ಹಾಕಿ ,ಹುರಿದು, ಸ್ವಲ್ಪ ಇಂಗು ಹಾಕಿ, ಮೆಂತ್ಯ ಸೊಪ್ಪು(ಎರಡು ಚಿಕ್ಕ ಕಟ್ಟು ತೊಳೆದು ಹೆಚ್ಚಿದ್ದು) ಹಾಕಿ, ಒಂದೈದು ನಿಮಿಷ ಬಾಡಿಸಿ, ಬೆಂದ ಬೇಳೆಯ ಮಿಶ್ರಣ ಹಾಕಿ, ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ಬೆಲ್ಲ ಹಾಕಿ, ಒಂದು ಕುದಿ ಕುದಿಸಿ… ಈಗ ಆರೋಗ್ಯಕರ ಮೆಂತ್ಯ ಸೊಪ್ಪಿನ ತೊವ್ವೆ ಸವಿಯಲು ಸಿದ್ಧ…

ನೀವು ತೊಗರಿಬೇಳೆಯನ್ನು ಉಪಯೋಗಿಸಿ ಸಹ ಮಾಡಬಹುದು…

Leave a comment

This site uses Akismet to reduce spam. Learn how your comment data is processed.