Beetroot Paratha/Roti Recipe(ಬೀಟ್ರೂಟ್ ಪರೋಟ/ರೋಟಿ ಮಾಡುವ ವಿಧಾನ)

When you are bored eating Beetroot stir fry, you can make these healthy Beetroot Rotis/ parathas, for breakfast or lunch..

ಬೀಟ್ರೂಟ್ ನಿಂದ ಸಾಮಾನ್ಯವಾಗಿ ಪಲ್ಯ ಮಾಡಿಕೊಳ್ಳುತ್ತೇವೆ… ಈ ರೀತಿಯ ಪರೋಟ ಕೂಡ ಚೆನ್ನಾಗಿರುತ್ತದೆ… ಒಮ್ಮೆ ಪ್ರಯತ್ನಿಸಿ ಹೇಗಿತ್ತೆಂದು ತಿಳಿಸಿ…

IMG_20200811_193802

Ingredients Needed / ಬೇಕಾದ ಸಾಮಗ್ರಿಗಳು 

Beetroot/ ಬೀಟ್ರೂಟ್ – 1 big
Wheat flour / ಗೋಧಿ ಹಿಟ್ಟು – 2 to 3 cups
Salt
Red chilli powder ಅಚ್ಚ ಖಾರದ ಪುಡಿ – 1/2 tspn
Dhaniya powder/ ಕೊತ್ತಂಬರಿ ಬೀಜದ ಪುಡಿ – 1/2 tspn
Ajwain ಓಂ ಕಾಳು- 1/4 tspn
Til seeds/ ಎಳ್ಳು- 1 tspn
Oil / ಎಣ್ಣೆ – 1 tspn + for roasting

Method/ ಮಾಡುವ ವಿಧಾನ ಹೀಗಿದೆ

ಮೊದಲಿಗೆ ಬೀಟ್ರೂಟ್ ಸಿಪ್ಪೆ ಹೆರೆದು, ಹೆಚ್ಚಿ, ಸ್ವಲ್ಪವೇ ನೀರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ, ತಣ್ಣಗಾದ ನಂತರ, ಬೆಂದ ನೀರಿನಲ್ಲೇ, ಪೇಸ್ಟ್ ಮಾಡಿಕೊಳ್ಳಿ…

First peel Beetroot and chop into pieces.. Cook with very little water , cool and make a paste..

ಒಂದು ಪಾತ್ರೆಗೆ, ಗೋಧಿ ಹಿಟ್ಟು,ಎಣ್ಣೆ, ಉಪ್ಪು, ಅಚ್ಚ ಖಾರದ ಪುಡಿ, ಧನಿಯ ಪುಡಿ, ಓಂ ಕಾಳು, ಎಳ್ಳು, ಕಲಸಿ… ನಂತರ ನೋಡಿಕೊಂಡು, ಬೀಟ್ರೂಟ್ ಪೇಸ್ಟ್ ಅನ್ನು ಸ್ವಲ್ಪ ಸ್ವಲ್ಪವೇ ಸೇರಿಸಿಕೊಳ್ಳಿ.. ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ… ಗಟ್ಟಿ ಎನಿಸಿದರೆ ಇನ್ನೂ ಸ್ವಲ್ಪ ನೀರು ಹಾಕಿಕೊಂಡು ಕಲಸಿಕೊಳ್ಳಿ… ಇಪ್ಪತ್ತು ನಿಮಿಷ ನೆನೆಯಲು ಬಿಡಿ…

To a bowl, add Wheat flour, oil, salt, Red chilli powder, Dhaniya Powder, Ajwain, Til seeds, mix well and slowly add Beet root paste, mix and make dough like chapathi.. If you feel it’s hard dough, mix some more water , else not required…  Keep aside for 20 mins..

ಈಗ ಸ್ವಲ್ಪ ಉಂಡೆ ತೆಗೆದುಕೊಂಡು ಲಟ್ಟಿಸಿ, ಎರಡೂ ಬದಿಗೆ ಬೇಯಿಸಿ, ಈಗ ಬೀಟ್ರೂಟ್ ರೋಟಿ ನಿಮ್ಮಿಷ್ಟದ ಚಟ್ನಿ/ ಚಟ್ನಿ ಪುಡಿ/ ಉಪ್ಪಿನಕಾಯಿ/ ಗ್ರೇವಿ ಜೊತೆ ಸವಿಯಲು ಸಿದ್ಧ..

Now pull out small balls from the dough , flatten the dough into rotis/ parathas( use flour to dust if needed) and serve with Chutney/ Chutney powder/ Any gravies..

Leave a comment

This site uses Akismet to reduce spam. Learn how your comment data is processed.