Broken Wheat Pongal Recipe (ಗೋಧಿ ನುಚ್ಚಿನ ಪೊಂಗಲ್ ಮಾಡುವ ವಿಧಾನ)

Hello dear readers,

Using broken wheat in our diet is gaining popularity these days, be it for diabetics or for diet conscious people.. We can make, kheer, bisibelebath, pongal etc using broken wheat.. I will post those recipes soon..

Ingredients needed for mixed veg broken wheat pongal are

Broken wheat 1 cup
Moong dal 1 cup
Mixed veggies like beans , carrot, cabbage, tomato – each 1 fistful
Pepper jeera powder- 1 spoon of each dry roasted and powdered
Ginger grated – half spoon
Salt
Green chillies – 3 slit

First wash broken wheat and moongdal together and cook with 3 cups of water… Half boil all veggies..

Now in a vessel, take 5 spoons oil, splutter mustard, cumin and add ginger, Curry leaves, green chillies,pepper jeera powder-, boiled veggies, fry well, add boiled broken wheat and moongdal mixture, salt and boil well..

Serve as it is or chutney…let me know how it turned out !!!

****** ****** *****

ನನಗೆ ಈ ಗೋಧಿನುಚ್ಚಿನ ಪರಿಚಯವಾಗಿದ್ದು ನಮ್ಮತ್ತೆ ಅವರಿಂದ..

ಶುಗರ್ ಇರುವವರಿಗೆ ಹಾಗೂ ಡಯಟ್ ಮಾಡುವವರಿಗೆ ಮೊದಲು ಡಾಕ್ಟರ್ ಹೇಳುವುದು, ಅನ್ನ ಕಡಿಮೆಮಾಡಿ ಅದರ ಬದಲು ಗೋಧಿ ನುಚ್ಚು ಉಪಯೋಗಿಸಬೇಕು ಎಂದು.. ಯಾಕೆಂದರೆ ಇದರಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಬೇಗ ಜೀರ್ಣವಾಗುತ್ತದೆ..ಈ ನುಚ್ಚಿನಲ್ಲಿ, ಪಾಯಸ, ಪೊಂಗಲ್, ಬಿಸಿಬೇಳೆಬಾತ್ ಮಾಡುತ್ತಾರೆ.. ಅವುಗಳ ರೆಸಿಪಿ ಶೀಘ್ರದಲ್ಲೇ ಹಾಕುತ್ತೇನೆ..

ಮಿಶ್ರ ತರಕಾರಿ ಗೋಧಿ ನುಚ್ಚಿನ ಪೊಂಗಲ್ ಮಾಡುವ ವಿಧಾನ ಹೀಗಿದೆ..

ಒಂದು ಕಪ್ ಗೋಧಿನುಚ್ಚು
ಒಂದು ಕಪ್ ಹೆಸರುಬೇಳೆ
ಮಿಶ್ರ ತರಕಾರಿಗಳು ಹುರುಳಿಕಾಯಿ, ಕ್ಯಾರಟ್, ಟೊಮೆಟೊ, ಕೋಸು ಎಲ್ಲ ಒಂದೊಂದು ಹಿಡಿ..
ಜೀರಿಗೆ ಹಾಗೂ ಮೆಣಸು ಒಂದೊಂದು ಚಮಚ ಹುರಿದು ಪುಡಿ ಮಾಡಿದ್ದು..
ಉದ್ದಕ್ಕೆ ಹೆಚ್ಚಿದ 3 ಹಸಿಮೆಣಸಿನಕಾಯಿ
ಕರಿಬೇವು ಸ್ವಲ್ಪ
ಶುಂಠಿ ತುರಿ ಸ್ವಲ್ಪ
ಉಪ್ಪು

ಮೊದಲಿಗೆ ಗೋಧಿ ನುಚ್ಚು ಹಾಗೂ ಹೆಸರುಬೇಳೆಯನ್ನು ಒಟ್ಟಿಗೆ ಚೆನ್ನಾಗಿ ತೊಳೆದು,3 ಕಪ್ ನೀರು ಹಾಕಿ ಕುಕರ್ ನಲ್ಲಿ ಬೇಯಿಸಿಕೊಳ್ಳಿ..

ತರಕಾರಿಗಳನ್ನು ಲಘುವಾಗಿ ಬೇಯಿಸಿಕೊಳ್ಳಿ..

ಈಗ ಒಂದು ಪಾತ್ರೆಯಲ್ಲಿ, ಎಣ್ಣೆ 5 ಚಮಚ ಹಾಕಿ, ಕಾದ ನಂತರ , ಸಾಸಿವೆ, ಜೀರಿಗೆ ಸಿಡಿಸಿ, ಹೆಚ್ಚಿದ ಹಸಿಮೆಣಸಿನಕಾಯಿ, ಅರಿಶಿನ, ಕರಿಬೇವು, ಶುಂಠಿ ಹಾಕಿ ಹುರಿದು, ಬೆಂದ ತರಕಾರಿ, ಬೇಳೆ ಹಾಗೂ ನುಚ್ಚಿನ ಮಿಶ್ರಣ ಹಾಕಿ,ಉಪ್ಪು, ಮೆಣಸು ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ.. ಒಂದು ಕುದಿ ಬಂದ ನಂತರ ಕೆಳಗಿಳಿಸಿ.. ಸರ್ವ್ ಮಾಡಿ..

IMG_20191013_145803

ಇದಕ್ಕೆ ಬೇಕಾದರೆ ಚಟ್ನಿ ಮಾಡಿಕೊಳ್ಳಬಹುದು… ಹಾಗೆಯೂ ಚೆನ್ನಾಗಿರುತ್ತದೆ..ಮಾಮೂಲಿ ಪೊಂಗಲ್ ತಿಂದಂತೆ ಇರುತ್ತದೆ ರುಚಿ.. ಮಕ್ಕಳಿಗೂ ಕೊಡಬಹುದು ಬಹಳ ಆರೋಗ್ಯಕರ…

ಮಾಡಿ ನೋಡಿ ಹೆಗಿತ್ತೆಂದು ಕಮೆಂಟ್ ಮಾಡುವುದನ್ನು ಮರೆಯಬೇಡಿ… 💐💐

 

One thought on “Broken Wheat Pongal Recipe (ಗೋಧಿ ನುಚ್ಚಿನ ಪೊಂಗಲ್ ಮಾಡುವ ವಿಧಾನ)

  1. Pingback: Broken wheat pulav recipe( ಗೋಧಿ ನುಚ್ಚಿನ ಪಲಾವ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

Leave a comment

This site uses Akismet to reduce spam. Learn how your comment data is processed.