Nodu Nodu Kannara(ನೋಡು ನೋಡು ಕಣ್ಣಾರ) lyrics

Hello my dear readers,

Today being friday, I am posting the lyrics of one of the old and popular bhakti geethe by Smt B K Sumitra, which praises Lord Chamundeshwari… Here I am adding one more geethe lyrics to the B K Sumitra collection ,two are posted earlier…For all the 3 Bhakti geethes I am not sure on the author/lyricist.. If anybody aware, can just comment below.. This song is one of the most played songs across the streets of Namma Bengalooru during orchestras of Annamma devi utsavas…

images

ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದಾ ತುಂಬು ಮಮತೆ ಇಂದಾ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು …|| ನೋಡು ನೋಡು ಕಣ್ಣಾರ…||

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಸಾಸುರ ಮರ್ಧಿನಿಯ ವೈಭವ ಲೀಲೆ
ಧನುಜ ಸಂಹಾರಿಣೀ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ ||

||ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು ||

ನಂಬಿರುವ ಭಕ್ತರ ರಕ್ಷೆಗಾಗಿ, ನಂಬದಿಹ ದುಷ್ಟರ ಶಿಕ್ಷೆಗಾಗಿ
ನಂಬಿರುವ ಭಕ್ತರ ರಕ್ಷೆಗಾಗಿ, ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ||

||ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು ||

ಉಕ್ಕಿ ಬಹ ನದಿಯಲ್ಲಿ ಅವಳ ನಗೆ
ಬೀಸಿ ಬಹ ಗಾಳಿಯಲಿ ಅವಳುಸಿರು
ಹಸಿ ಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ||

||ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತ ಚಾಮುಂಡಿ ನಿಂತಿಹಳು ||

One thought on “Nodu Nodu Kannara(ನೋಡು ನೋಡು ಕಣ್ಣಾರ) lyrics

Leave a comment

This site uses Akismet to reduce spam. Learn how your comment data is processed.