Baaladattane ELu Devotional Song Lyrics (ಬಾಲದತ್ತನೆ ಏಳು ಸಾಹಿತ್ಯ)

This devotional song is dedicated to Guru Dattatreya , who is the reincarnation of Lord Shiva, Lord Vishnu and Lord Brahma , born to Athri Maharishi and Anasuya Devi..

ಅತ್ರಿ ಮಹರ್ಷಿಗಳು ಹಾಗೂ ಅನಸೂಯ ದೇವಿಯ ಪುತ್ರ ಗುರು ದತ್ತಾತ್ರೇಯ– ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು, ಮಹೇಶ್ವರರ ಅವತಾರ ಎಂಬುದೇ ನಂಬಿಕೆ.. ಈ ಹಾಡು ಡಾಕ್ಟರ್ ರಾಜಕುಮಾರ್ ಅವರು ಹಾಡಿರುವ ಸುಮಧುರ ಭಕ್ತಿಗೀತೆ…

wv5Vsj1533800271

ಬಾಲ ದತ್ತನೆ ಏಳು ಸತ್ಯದತ್ತನೆ ಏಳು
ಅತ್ರಿ ತನಯನೇ ಎಳು ಬೆಳಗಾಯಿತಯ್ಯ||

ಕಮಲಾಸನ ಏಳು, ಕಮಲನಾಭನೆ ಏಳು,
ಕರ ಮುಗಿವೆ ಪರಶಿವನೇ ಎಳು ಏಳಯ್ಯ||
ಬಾಲ ದತ್ತನೆ|

ಉಷೆಯು ಹಾಡುತಿರಲು ಅರುಣರಾಗವನು
ರವಿಯು ಚೆಲ್ಲುತ್ತಿರಲು ಹೊನ್ನ ಕಿರಣವನು|
ಹಿಮದ ತೆರೆ ಮರೆಯಾಗಿ, ಮೊಗ್ಗುಗಳು ಹೂವಾಗಿ, ಪೂಜಿಸಲು ಕಾದಿಹವು ನಿನ್ನ ಪಾದಕಮಲವನು||

ಸುರರು ದರುಶನಕೆಂದು ಓಡೋಡಿ ಬರಲು
ಋಷಿಗಳೆಲ್ಲರು ಕಾಣುವಾಸೆ ಹೊಂದಿರಲು,
ಭಕುತರ ಸಲುವಾಗಿ, ನಾರದರು ಇಂಪಾಗಿ,
ಗಾನ ಮಾಡುತಲಿಹರು ನಿನ್ನ ಮಹಿಮೆಯನು||

ಹೊನ್ನತಾವರೆ ಹಿಡಿದು ಶ್ರೀದೇವಿ ಬರಲು ,
ವಾಗ್ದೇವಿ ಮಲ್ಲಿಗೆಯ ಹೂವು ತಂದಿರಲು , ಪಾರ್ವತಿಯು ಕರದಲಿ ತುಂಬೆ ಹೂಗಳ ಹಿಡಿದು.. ಗುರುದತ್ತಾ ಕೃಪೆ ಮಾಡೋ ಎನ್ನುತಿಹಳು||

ಸೂರ್ಯ ಬೆಳಗಲಿ ನಿನ್ನ ಕಣ್ಣ್ ಬೆಳಕಿನಿಂದ|
ತಾರೆ ಮಿನುಗಲಿ ನಿನ್ನ ಕಣ್ ಬೆಳಕಿನಿಂದ|
ಕರುಣೆ ತುಂಬಿದ ನಿನ್ನ ಕಣ್ಣಿನ ಬೆಳಕಿಂದ|
ಚಂದಿರನ ಕಾಂತಿಯು ಹೊಮ್ಮಬೇಕಯ್ಯ ….||

ಬಾಲ ದತ್ತನೆ ಎಳು ಸತ್ಯದತ್ತನೆ ಏಳು ಅತ್ರಿತನಯನೆ ಏಳು …….

One thought on “Baaladattane ELu Devotional Song Lyrics (ಬಾಲದತ್ತನೆ ಏಳು ಸಾಹಿತ್ಯ)

  1. Pingback: Neenu naanu onde enu(ನೀನು ನಾನು ಒಂದೇ ಏನು)lyrics | Life is Marvellous

Leave a comment

This site uses Akismet to reduce spam. Learn how your comment data is processed.