Huggi and instant gojju recipe- ಹುಗ್ಗಿ – ಧಿಡೀರ್ ಗೊಜ್ಜು ಮಾಡೋ ವಿಧಾನ

This is an awesome lunch box recipe.. Traditional dish and very healthy as well.. If you like it, you can have it for breakfast as well.. lately have installed Kannada app, hence using the same here..

ಹುಗ್ಗಿ ಅಥವಾ ಖಾರ ಪೊಂಗಲ್ ತುಂಬಾ ಹಳೆ ತಿಂಡಿ.. ಸಾಮಾನ್ಯ ನಿಮಗೆಲ್ಲ ವಿಧಾನ ಗೊತ್ತಿರುತ್ತದೆ.. ಇಲ್ಲಿ ನಾನು ನಮ್ಮ ಅತ್ತೆಯಿಂದ ಕಲಿತ ವಿಧಾನ ಹಾಕುತ್ತಿದ್ದೀನಿ.. ಮಾಡಿ ನೋಡಿ ತಿಳಿಸಿ..

ಬೇಕಾದ ಪದಾರ್ಥಗಳು

ಒಂದು ಕಪ್ ಹೆಸರು ಬೇಳೆ
ಒಂದು ಕಪ್ ಅಕ್ಕಿ
ಎರಡು ಹಸಿಮೆಣಸಿನಕಾಯಿ ಉದ್ದಕ್ಕೆ ಹೆಚ್ಚಿದ್ದು
ಒಂದು ಸ್ಪೂನ್ ಜೀರಿಗೆ
ಒಂದು ಸ್ಪೂನ್ ಮೆಣಸು
ಜೀರಿಗೆ ಮೆಣಸನ್ನು ತರಿಯಾಗೆ ಪುಡಿ ಮಾಡಿ ಅಥವಾ ಹಾಗೆ ಹಾಕಬಹುದು ನಿಮ್ಮಿಷ್ಟ..
ಅರ್ಧ ಹೋಳು ಕಾಯಿ ತುರಿ
ಕರಿಬೇವು ಹತ್ತು ಎಲೆ

1497585686839

ವಿಧಾನ
ಮೊದಲು ಎರಡು ಸ್ಪೂನ್ ತುಪ್ಪದಲ್ಲಿ ಹೆಸರು ಬೇಳೆ ಕೆಂಬಣ್ಣ ಬರೋವರೆಗೆ ಹುರಿದುಕೊಳ್ಳಿ… ನಂತರ ಹುರಿದ ಬೇಳೆ ತಣ್ಣಗಾದ ಮೇಲೆ ಅದರ ಜೊತೆ ತೊಳೆದ ಅಕ್ಕಿ ಹಾಕಿ ನಾಲ್ಕು ಲೋಟ ನೀರು ಹಾಕಿ cooker ನಲ್ಲಿ ಕೂಗಿಸಿ ಇಡೀ..

ಒಂದು ಬಾಣಲೆಗೆ ಮೂರು ಸ್ಪೂನ್ ತುಪ್ಪ ಹಾಕಿ ಅರ್ಧ ಸ್ಪೂನ್ ಜೀರಿಗೆ ಹಾಕಿ, ಹುರಿದು, ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ, ಬಾಡಿಸಿ, ಕರಿಬೇವು ಹಾಕಿ, ಜೀರಿಗೆ ಮೆಣಸು ಪುಡಿ ಮಾಡಿದ್ದು ಹಾಕಿ, ಕಾಯಿ ತುರಿ ಹಾಕಿ, ಬೆಂದ ಅಕ್ಕಿ ಬೇಳೆ ಮಿಶ್ರಣ ಹಾಕಿ ಬೇಯಿಸಿ, ಉಪ್ಪು ಹಾಕಿ ಚೆನ್ನಾಗಿ ಕುದ್ದಿಸಿ..
ಬೇಕಾದರೆ ಸ್ವಲ್ಪ ಬೆಲ್ಲ ಹಾಕಬಹುದು..

ಧಿಡೀರ್ ಗೊಜ್ಜು
ಹುಣಸೆ ಹಣ್ಣು ರಸ ತೆಳೆದುಕೊಳ್ಳಿ.. ಅದಕ್ಕೆ ಎರಡು ಸ್ಪೂನ್ ಸಾರಿನ ಪುಡಿ ಅಥವಾ ಮೆಣಸಿನ ಪುಡಿ ಹಾಕಿ ಬೆಲ್ಲ ಹಾಕಿ ಕುದ್ದಿಸಿ.. ಉಪ್ಪು ಹಾಕಿ.. ಇದಕ್ಕೆ ಸಾಸಿವೆ, ಇಂಗು, ಕರೀಬೇವು ಒಗ್ಗರಣೆ ಕೊಡಿ.. ನಮ್ಮ ತಾಯಿ ಹೀಗೆ ಗೊಜ್ಜು ಮಾಡು ತ್ತಾರೆ… ಮಾಡಿ ನೋಡಿ ಲಂಚ್ ಬಾಕ್ಸ್ ಗೆ ಕಳಿಸಿ.

 

Notes

ತುಪ್ಪ ಹೇಳಿರುವ ಜಾಗದಲ್ಲಿ ಎಣ್ಣೆ ಉಪಯೋಗಿಸಬಹುದು…ಒಣದ್ರಾಕ್ಷಿ, ಗೋಡಂಬಿ ಕರಿದು ಹಾಕಬಹುದು..

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s