Rava laddu recipe – ರವೆ ಉಂಡೆ ರೆಸಿಪಿ

ನಮಸ್ಕಾರ ನನ್ನ ಪ್ರೀತಿಯ ಓದುಗರಿಗೆ,

ಸ್ವಲ್ಪ ತಿಂಗಳ ಬಿಡುವಿನ ನಂತರ ಬ್ಲಾಗ್ ಗೆ ವಾಪಸ್ ಆಗಿದ್ದೇನೆ ಈ ಸಿಹಿ ತಿಂಡಿಯ ಜೊತೆಗೆ… ಸ್ವೀಕರಿಸಿ… ☺💐…

ಎಲ್ಲರಿಗೂ ರವೆ ಉಂಡೆಯ ರೆಸಿಪಿ ಗೊತ್ತೇ ಇರುತ್ತದೆ… ಇದು ಬಹಳಾ ಹಳೆ ಕಾಲದ ತಿಂಡಿ.. ನಮ್ಮ ಮನೆಯಲ್ಲಿ ನಾವು ಮಾಡೋ ವಿಧಾನ ತಿಳಿಸುತ್ತಿದ್ದೇನೆ …

1497495047241

ಬೇಕಾಗುವ ಪದಾರ್ಥಗಳು ಹೀಗಿವೆ::-

ಸಣ್ಣ ರವೆ ಅಥವಾ ಚಿರೋಟಿ ರವೆ – 1 ಕಪ್
ಸಕ್ಕರೆ ಪುಡಿ – 1ಕಪ್
ಒಣ ಕೊಬ್ಬರಿ -ಅರ್ಧ ಗಿಟುಕು ತುರಿ
ಏಲಕ್ಕಿ, ಲವಂಗ ಸಕ್ಕರೆ ಜೊತೆಗೆ ಪುಡಿ ಮಾಡಿದ್ದು
ತುಪ್ಪ – ಕಾಲು ಕಪ್ ಅಥವಾ ನಾಲ್ಕು ಸ್ಪೂನ್
ಹಾಲು – ಕಾಲು ಕಪ್ ಅಥವಾ ನೋಡಿಕೊಂಡು
ಒಣದ್ರಾಕ್ಷಿ, ಗೋಡಂಬಿ ತುಪ್ಪದಲ್ಲಿ ಕರಿಯಲು

ವಿಧಾನ

ಮೊದಲಿಗೆ ಸ್ವಲ್ಪ ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಕರಿದುಕೊಳ್ಳಿ.ತೆಗೆಡಿದಿ.
ನಂತರ ಅದೇ ಬಾಣಲೆಯಲ್ಲಿ ರವೆ ಹಾಕಿ ಹುರಿದು ಬೆಚ್ಚಗೆ ಮಾಡಿ, ಹಸಿ ವಾಸನೆ ಹೋದರೆ ಸಾಕು.. ಅದಕ್ಕೆ ತುರಿದ ಒಣಕೊಬ್ಬರಿ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ.
ಈಗ ಸಕ್ಕರೆ ಪುಡಿ ಸೇರಿಸಿ, ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿ , ಎಲ್ಲವನ್ನೂ ಚೆನ್ನಾಗಿ ಕಲಸಿ… ಎರಡು ನಿಮಿಷ ಬಿಟ್ಟು ಉಂಡೆ ಕಟ್ಟಿ…
ಉಂಡೆ ಕಟ್ಟಲು ಸ್ವಲ್ಪ ಒಣಗಿದಂತೆ ಅನಿಸಿದ್ರೆ ಚೆನ್ನಾಗಿ ಕುದ್ದಿಸಿದ ಹಾಲು ಅಥವಾ ಇನ್ನು ಸ್ವಲ್ಪ ತುಪ್ಪ ಸೇರಿಸಿ ಉಂಡೆ ಕಟ್ಟಿರಿ…

1497494577850

ಇದೆ ವಿಧಾನದಲ್ಲಿ ಬನ್ಸಿ ರವೆ ಉಪಯೋಗಿಸಿ ಮಾಡಬಹುದು… ಅದಕ್ಕೆ ಸ್ವಲ್ಪ ಹುರಿಯುವ ಸಮಯ ಹೆಚ್ಚು…

ಹೇಗಿದೆ ಅಂತ ಮಾಡಿ ನೋಡಿ ತಿಳಿಸಿರಿ… ☺☺

Advertisements

One thought on “Rava laddu recipe – ರವೆ ಉಂಡೆ ರೆಸಿಪಿ

  1. Pingback: Deepavali – ದೀಪಾವಳಿ | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s